Karagida Baaninalli Lyrics ಕರಗಿದ ಬಾನಿನಲ್ಲಿ ಹಾಡಿನ ಸಾಹಿತ್ಯ
ಅಮಾವಾಸ್ಯೆ ಯಂದು ಚಂದ್ರ ಕಂಡಿದ್ದಾನೆ ಶುಭವೋ ಅಶುಭವೋ ತಿಳಿಯದು
ಹುಣ್ಣಿಮೆಯ ದಿನದಂದು ಈತ ಜೊತೆಗಿದ್ದಾನೆ ಪ್ರೀತಿಯ ಉಪಶಮನದ ಮಜಲಿದು
ಕರಗಿದ ಬಾನಿನಲ್ಲಿ ಮುಡಿ ಬಾ ನೀ ಚಂದಿರ
ನಸುಕಿನ ಕನಸಿನಲ್ಲಿ ನಿನ್ನ ನೆನಪೇ ಸುಂದರ
ಬಾಡಿದ ಈ ಮನ, ಬಯಸೋ ಹುಡುಗನು ನೀನಾ
ಅರಲುವ ಈ ಮನ, ಮೊಗ್ಗಾದೆ ನಾ
ಕಾಡು ಮಳೆಯನು, ಮಳೆಯ ನೆನಪನು, ನೆನಪ ಹಸಿವನ್ನು ಮರೆಸು ಬಾ
ಸಿಗುವ ಒಲವನು, ಒಲವ ಕನಸನು, ಕನಸ ಉಡುಪನು ತೋಡಿಸು ಬಾ
ಕರಗಿದ ಬಾನಿನಲ್ಲಿ ಮುಡಿ ಬಾ ನೀ ಚಂದಿರ
ನಸುಕಿನ ಕನಸಿನಲ್ಲಿ ನಿನ್ನ ನೆನಪೇ ಸುಂದರ
ನೆರಳಿನ ನೆನಪನೆ ಹೋಲುವ ಗೆಳೆಯನೆ
ಬೆಳಕಿಗೆ ಬದುಕನೆ ಮೂಡಿಸಿ ಕಲ್ಪನೆ
ನೀರ ಒಳಗೆ ಅಳುವ ಮೀನು ನಾ, ಹನಿಯ ಒರಸೋ ಬೆರಳು ನೀನೆ ನಾ
ನಲುಗಿ ಬಾಡೋ ಹೂವು ನಾನದೆ, ಮೆಲ್ಲ ಒಳಗೆ ನುಸಿಲಿ ನೀ ಬಂದೆ
ಹಗಲ ಶಶಿಯು ನೀನಾದೇಯ
ಕಾಡು ಮಳೆಯನು, ಮಳೆಯ ನೆನಪನು ನೆನಪ ಹಸಿವನ್ನು ಮರೆಸು ಬಾ
ಸಿಗುವ ಒಲವನು ಒಲವ ಕನಸನು, ಕನಸ ಉಡುಪನು ತೋಡಿಸು ಬಾ
ಕರಗಿದ ಬಾನಿನಲ್ಲಿ ಮುಡಿ ಬಾ ನೀ ಚಂದಿರ
ನಸುಕಿನ ಕನಸಿನಲ್ಲಿ ನಿನ್ನ ನೆನಪೇ ಸುಂದರ
ಚದುರಿದ ಮೊಡವ ಕೂಡಿಸೋ ಬಿಂದುವೇ
ನನ್ನಯ ನೀರವ ತೊರೆಯಲು ಸಾದ್ಯವೇ
ಸುರಿವ ಮಳೆಯ ಪರಿವೆ ನನಗಿಲ್ಲ
ನಿನ್ನ ಹೊರತು ಬೇರೆ ಸೊಗಸಿಲ್ಲ
ಸರಿದ ಸೂರ್ಯ ಕಿರಣ ಬೀರೋಲ್ಲ ನಿನ್ನ ಹೊಳಪ ಮೀರೋ ಮಿನುಗಿಲ್ಲ
ಇರುಳ ದೀಪ ನೀನಾದೇಯಾ
ಕಳೆದ ದಿನವನು ಪಡೆದ ನೋವನು ಕಾಡೋ ಮಳೆಯನು ಮರೆಸು ಬಾ
ಸಿಗುವ ನಗುವನು ನಾಳೆ ಕನಸನ್ನು ಒಲವ ಉದುಪನು ತೋಡಿಸು ಬಾ
ಸಂಗೀತ: ಭರತ್ | ಸಾಹಿತ್ಯ: ಸುನಿ, ಸಿದ್ದು ಕೊಡಿಪುರ | ಹಾಡಿದವರು: ಸೌಮ್ಯ ನಿರ್ದೇಶನ: ಸುನಿ
Simple Agi Ondu Love Story, Karagida Baaninalli Lyrics, ಕರಗಿದ ಬಾನಿನಲ್ಲಿ ಹಾಡಿನ ಸಾಹಿತ್ಯ, ಸಿಂಪಲ್ ಆಗಿ ಒಂದು ಲವ್ ಸ್ಟೋರಿ,
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ